ಮಾಹಿತಿ ಕಣಜ:
ಚುನಾವಣೆಯ ಸಮಯದಲ್ಲಿ ನೀಡಿದ್ದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು ಸುಮಾರು 1.10 ಕೋಟಿ ಮನೆ ಯಜಮಾನಿಯರ ಖಾತೆಗೆ ತಲಾ 2000 ರೂ. ಜಮೆ ಮಾಡಲಾಗಿದೆ.
ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಹಣ ಬಹುತೇಕ ಮಹಿಳೆಯರ ಕೈ ಸೇರುವ ಮೊದಲೇ ಬ್ಯಾಂಕುಗಳ ಪಾಲಾಗಿದೆ. ಬುಧುವಾರ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗಿದ್ದರೂ ಹೆಚ್ಚಿನ ಮಹಿಳೆಯರಿಗೆ ಹಣ ಕೈ ಸೇರಿಲ್ಲ.
ಖಾತೆಗೆ ಬಂದ ಗೃಹಲಕ್ಷ್ಮಿ ಹಣ ಪಡೆಯಲು ಮಹಿಳೆಯರು ಬ್ಯಾಂಕ್ ಮುಂದೆ ಮುಗಿಬಿದ್ದ ಕಾರಣ ಬ್ಯಾಂಕುಗಳಲ್ಲಿ ಭಾರಿ ಜನಸಂದಾಣಿ ಕಂಡುಬಂದಿದೆ. ಗೃಹಲಕ್ಷ್ಮಿ ಹಣ ಪಡೆಯಲು ಮಹಿಳೆಯರು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಹಿಳೆಯರ ಖಾತೆಗೆ ಬಂದ ಗೃಹಲಕ್ಷ್ಮಿ ಯೋಜನೆಯ ಹಣ ಹಳೆಯ ಸಾಲಕ್ಕೆ ಜಮಾ ಆಗಿದೆ.
ರಾಜ್ಯದ ಗ್ರಾಮೀಣ ಪ್ರದೇಶದ ಜನರು, ರೈತರು ಮನೆಯೊಡತಿ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ವಿವಿಧ ಸಾಲ ಪಡೆದುಕೊಂಡಿರುತ್ತಾರೆ. ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ. ಇನ್ನು ಬಡ್ಡಿ ಸಹಿತವಾಗಿ ಸಾಲ ಬೆಳೆದಿದ್ದು ಗೃಹಲಕ್ಷ್ಮಿ ಯೋಜನೆಯ ಹಣ ಅಂತಹ ಖಾತಿಗೆ ಜಮಾ ಆದ ಕೂಡಲೇ ಬ್ಯಾಂಕುಗಳು ಹಳೇ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿವೆ. ಹೀಗಾಗಿ ರಾಜ್ಯದ ಮಹಿಳೆಯರ ಕೈ ಸೇರುವ ಮೊದಲೇ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕುಗಳ ಪಾಲಾಗುತ್ತಿದೆ. ಇನ್ನೂ ಕೆಲವರು ಹೊಸ ಖಾತೆ ಸಂಖ್ಯೆ ನೀಡಿದ್ದರೂ ಹಳೆ ಖಾತೆಗೆ ಹಣ ಜಮಾ ಆಗಿದೆ ಎಂದು ಹೇಳಲಾಗಿದೆ.
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
ಹಳೆ ಸಾಲ ಹಿಂತಿರುಗಿಸಿಕೊಳ್ಳುವ ಹೊಸ ತಂತ್ರ, ಹಂತ ಹಂತದ ಸಾಲ ಮನ್ನಾ..... ಸೂಪರ್ ಸಿದ್ದರಾಮಯ್ಯ.
ಪ್ರತ್ಯುತ್ತರಅಳಿಸಿ