ಮಾಹಿತಿ ಕಣಜ

ಎಲ್ಲಾ ಸುದ್ದಿಗಳು ಒಂದೇ ವೇದಿಕೆಯಲ್ಲಿ

Responsive Ads

Responsive Ads

ಬುಧವಾರ, ಸೆಪ್ಟೆಂಬರ್ 6, 2023

ರಾಜ್ಯದಲ್ಲಿ ಇದೆ ಒಂದು ವಿಶೇಷ ಗ್ರಾಮ: ಈ ಗ್ರಾಮದಲ್ಲಿ ಪ್ರತಿಯೊಂದು ಮನೆಯಲ್ಲೂ ಒಬ್ಬ ಶಿಕ್ಷಕ

Admin       ಬುಧವಾರ, ಸೆಪ್ಟೆಂಬರ್ 6, 2023ಮಾಹಿತಿ ಕಣಜ:-

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮವು ಶಿಕ್ಷಕರ ಗ್ರಾಮವಾಗಿದ್ದು ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬ ಶಿಕ್ಷಕರಿದ್ದಾರೆ. ಈ ಗ್ರಾಮದ ಪ್ರತಿಯೊಬ್ಬ ಪೋಷಕರ ಆಯ್ಕೆಯು ತಮ್ಮ ಮಕ್ಕಳನ್ನು ಶಿಕ್ಷಕನಾಗಿ ಮಾಡುವುದರಿಂದ ಬೋಧನೆಯನ್ನು ಶ್ರೇಷ್ಠ ವೃತ್ತಿ ಎಂದು ಪರಿಗಣಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ನಿವಾಸಿಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಇಂಚಲ ಗ್ರಾಮದ ಸುಮಾರು 500ಕ್ಕೂ ಹೆಚ್ಚು ಮಂದಿ ಶಿಕ್ಷಕನ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ರಾಜ್ಯದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಸಿದ್ದ ಸಂಸ್ಥಾನ ಮಠದ ಡಾ ಶಿವಾನಂದ ಭಾರತಿ ಸ್ವಾಮೀಜಿಯವರ ಶ್ರಮದಿಂದಾಗಿ ಜನರು ಅಧ್ಯಾಪನದಲ್ಲಿ ಆಸಕ್ತಿ ಬೆಳೆಸಿಕೊಂಡು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಶಾಂತಾನಂದ ಪ್ರೌಢಶಾಲೆ, ಮಠದ ಅನುದಾನಿತ ಶಾಲೆ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.

1983-84 ನೇ ಇಸವಿಯಲ್ಲಿ ಬೆಳಗಾವಿಯ KLE ಸಂಸ್ಥೆಯು ಇಂಚಲ ಗ್ರಾಮದಲ್ಲಿ ನಡೆಸಿದ ಶಿಬಿರದಿಂದ ಪ್ರಭಾವಿತರಾದ ಡಾ ಶಿವಾನಂದ ಭಾರತಿ ಸ್ವಾಮೀಜಿಯವರು 1986 ರಲ್ಲಿ ಶ್ರೀ ಮಠದಲ್ಲಿ ಶಿಕ್ಷಕರ ಪ್ರಮಾಣ ಪತ್ರ ಉನ್ನತ (TCH) ಕಾಲೇಜನ್ನು ಆರಂಭಿಸಿದರು. ಗ್ರಾಮಸ್ಥರ ಪ್ರಕಾರ ವಿದ್ಯಾರ್ಥಿಗಳು ಉಚಿತ ಪ್ರವೇಶವನ್ನು ನೀಡಿದ್ದರಿಂದ TCH ಗೆ ದಾಖಲು ಪ್ರೋತ್ಸಾಹಿಸಲಾಯಿತು.

1988 ರಿಂದ ಪ್ರತಿ ಬ್ಯಾಚ್ ನಿಂದ ಸರಾಸರಿ 20ಕ್ಕೂ ಹೆಚ್ಚು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿಯೇ ತರಬೇತಿ ಪಡೆದ ಒಟ್ಟು 7,000 ಶಿಕ್ಷಕರ ಪೈಕಿ ಶೇಕಡ 99 ರಷ್ಟು  ಶಿಕ್ಷಕರು ರಾಜ್ಯದ ವಿವಿಧ ಶಾಲೆಗಳಲ್ಲಿ ನೇಮಕಗೊಂಡಿದ್ದಾರೆ. 1997 ರ ಬ್ಯಾಚ್ ನಲ್ಲಿ ಕರಿಗಾರ ಕುಟುಂಬದಿಂದ ಕನಿಷ್ಠ 7 ಶಿಕ್ಷಕರು ನೇಮಕ ಮಾಡಿಕೊಳ್ಳಲಾಗಿದೆ. ಒಂದೇ ವರ್ಷದಲ್ಲಿ ಇಂಚಲ ಗ್ರಾಮದ 50 ಮಂದಿ ಶಿಕ್ಷಕರಾಗಿ ನೇಮಕಗೊಂಡಿದ್ದು ದಾಖಲಿಯಾಗಿದೆ.

ಇದಲ್ಲದೇ ಇಂಚಲ ಗ್ರಾಮದ ಗಾಣಗಿ, ರಾಯ ನಾಯ್ಕರ, ಮಿರ್ಜನ್ನವರ, ಬಡಲಿ, ಜಂಬಂಗಿ ಸೇರಿದಂತೆ ಒಟ್ಟು 15 ಜನ ಶಿಕ್ಷಕರಿದ್ದು ಇಂಚಲ ಗ್ರಾಮದ ಕರಿಗಾರ ಕುಟುಂಬ ಕೂಡ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿದೆ.

ನಿವೃತ್ತಿ ಪಡೆದಿರುವ ಉಪನ್ಯಾಸಕ ಆರ್.ಸಿ ರಾಯ್ ನಾಯ್ಕರ್ ಮಾತನಾಡಿ ಡಾ ಶಿವಾನಂದ ಭಾರತಿ ಸ್ವಾಮೀಜಿಯವರು ಗ್ರಾಮದಲ್ಲಿ TCH ಕೋರ್ಸ್ ಸಂಸ್ಥೆ ಸ್ಥಾಪಿಸಲು ನಿರ್ಧಾರ ಮಾಡಿದ್ದರಿಂದಲೇ ಇಷ್ಟೊಂದು ಜನ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.


😊 ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ 😊

logoblog

Thanks for reading ರಾಜ್ಯದಲ್ಲಿ ಇದೆ ಒಂದು ವಿಶೇಷ ಗ್ರಾಮ: ಈ ಗ್ರಾಮದಲ್ಲಿ ಪ್ರತಿಯೊಂದು ಮನೆಯಲ್ಲೂ ಒಬ್ಬ ಶಿಕ್ಷಕ

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ